ಸೂಕ್ಷ್ಮ ಕತೆಗಾರಿಕೆಯಿಂದ ಮತ್ತು ತನ್ನ ಕಾದಂಬರಿಗಳಿಂದ ಹೆಸರುವಾಸಿಯಾಗಿರುವ ಗುರುಪ್ರಸಾದ ಕಾಗಿನೆಲೆ ಅವರ ಕಥಾಸಂಕಲನವಿದು. ಅಮೆರಿಕ ಮತ್ತು ಭಾರತವೆರಡೂ ಸಮಾನ ಅವಕಾಶಗಳನ್ನು ಪಡೆಯುವ ಈ ಕತೆಗಳಲ್ಲಿ, ಎರಡೂ ಜಗತ್ತುಗಳನ್ನು ಹೊಸ ಕಣ್ಣುಗಳಿಂದ ನೋಡುವುದು ಸಾಧ್ಯವಾಗಿದೆ. ತನ್ನ ವೈದ್ಯಕೀಯ ಜಗತ್ತಿನ ಅನುಭವಗಳನ್ನೂ ಲೇಖಕರು ವಿವರವಾಗಿ ಪರಿಚಯಿಸುವುದರಿಂದ, ಮೂರನೆಯ ಜಗತ್ತಿನ ಅನಾವರಣವನ್ನೂ ಈ ಕತೆಗಳು ಮಾಡಿಕೊಡುತ್ತವೆ. ---------------------------------- 'ಧರ್ಮಾರ್ಥ' ಕತೆಯಲ್ಲಿ ಶ್ರೀನಿವಾಸನ 'ಅರ್ಥ'ದ ಅಗತ್ಯಗಳು ಮತ್ತು ಲೌಕಿಕ ಸುಖಗಳು ಈಡೇರುವಂತಾದರೆ ಮಾತ್ರ ಅವನಿಂದ ತಮ್ಮ 'ಧರ್ಮ'ದ ಅಗತ್ಯಗಳು ಮತ್ತು ಪಾರಮಾರ್ಥಿಕ ಅಭಿಲಾಷೆಗಳು ಪೂರೈಸುತ್ತವೆ ಎಂಬ ತಿಳಿವಳಿಕೆಯಲ್ಲಿ ನಿರೂಪಕನು ಅರ್ಚಕನ ಅಗತ್ಯಗಳನ್ನು ಮನವರಿಕೆ ಮಾಡಿಕೊಂಡು ಅವನ್ನು ಈಡೇರಿಸಲು ಮುಂದಾಗುತ್ತಾನೆ. ಅಂದರೆ ನಿರೂಪಕ ಮತ್ತು ಅವನಂಥ ಭಾರತೀಯರಿಗೆ ಅಮೆರಿಕನ್ ಆವರಣದಲ್ಲಿ ತಮ್ಮ 'ಭಾರತೀಯತೆ'ಯನ್ನು ಹೇಗಾದರೂ ಉಳಿಸಿಕೊಳ್ಳಬೇಕಾಗಿದೆ. ಈಗಷ್ಟೇ ಭಾರತದಿಂದ ಅಮೆರಿಕಕ್ಕೆ ಬಂದಿರುವ ಅರ್ಚಕ ಶ್ರೀನಿವಾಸನಿಗೆ ಅಮೆರಿಕದ ಬದುಕಿನ ಸುಖಸೌಲಭ್ಯಗಳು ದೊರಕದೆ ಅವನು ಅಲ್ಲಿ ಇರಲಾರ. ಈ ದ್ವಂದ್ವವ್ಯಂಗ್ಯ 'ಧರ್ಮಾರ್ಥ'ದ ಅತ್ಯಂತ ಸ್ವಾರಸ್ಯಕರ ಅಂಶವಾಗಿದೆ. -ಟಿ.ಪಿ. ಅಶೋಕ ---------------------------------- ದೇವರೆಂಬ ಸೂಕ್ಷ್ಮ ವಿಷಯದ ಕಥೆ ಹೇಳುವಾಗ ನೀವು ಸಾಧಿಸಿದ ಸಮಚಿತ್ತ ಅದ್ಭುತ. ಎಲ್ಲವನ್ನೂ ವ್ಯಂಗ್ಯವಾಗೇ ಹೇಳುತ್
ThriftBooks sells millions of used books at the lowest everyday prices. We personally assess every book's quality and offer rare, out-of-print treasures. We deliver the joy of reading in recyclable packaging with free standard shipping on US orders over $20. ThriftBooks.com. Read more. Spend less.