ಇದು ಬರೀ ನಕ್ಸಲ್]ವಾದದ ಕುರಿತಾದ ಕೃತಿಯಲ್ಲ. ಅದರ ಸಮರ್ಥನೆ ಅಥವಾ ನಕ್ಸಲರನ್ನು ಖಳರನ್ನಾಗಿ ಚಿತ್ರಿಸುವ ಉದ್ದೇಶವಿಟ್ಟುಕೊಂಡಿರುವ ಕಥೆಯೂ ಅಲ್ಲ. ಈಗಾಗಲೇ ಗೊತ್ತಿರುವ ಒಂದು ಸಿದ್ಧಾಂತದಿಂದ ಹೊರಟು, ಅದರ ಪ್ರತಿಪಾದನೆಗೆ ಹೊಂದುವ ಘಟನೆಯನ್ನು ಮಾತ್ರ ಜೋಡಿಸುವ ನಕಲಿ ಬುದುವಂತಿಕೆ ಇಲ್ಲಿಲ್ಲ. ಇದು, ಕುತೂಹಲದಿಂದ ಕಾಡಿನೊಳಗೆ ಹೊಕ್ಕು, ದಿಕ್ಕು - ದಾರಿ ತಪ್ಪಿಸಿಕೊಂಡು ಅಲೆದಾಡುತ್ತಿರುವವನಿಗೆ ಕಾಡೇ ಉಸುರಿದ ಆತ್ಮಕಥೆ ಇಲ್ಲಿನ ಹಲಬಗೆಯ ನಿರೂಪಣೆಗಳು, ಕಥನಗಳು, ದೃಷ್ಟಾಂತಗಳು, ತಾನು ಒರೆಯುತ್ತಿರುವ ಕಥೆಯೊಳಗೆ ತಾನೇ ಪಾತ್ರವೂ ಆದಾಗ ಹುಟ್ಟುವ ಅಸಹಾಯಕ ದಿಗ್ಭ್ರಮೆ, ಕ್ರೂರ ವಾಸ್ತವಕ್ಕೆ ಮೂಕಸಾಕ್ಷಿಯಾಗಬೇಕಾದ ಸಂಕಟ, ತನ್ನ ಅನುಭವಕ್ಕೆ ದಕ್ಕಿದ ಸತ್ಯವನ್ನು ಅದರ ಎಲ್ಲ ಸಂಕೀರ್ಣತೆಯೊಂದಿಗೇ ಹೇಳಬೇಕು ಎಂಬ ಒದ್ದಾಟ... ಈ ಎಲ್ಲವೂ ಸೇರಿ ಕಾಡಿಗಿರುವ ಜಟಿಲ ನಿಗೂಢತೆ ಈ ಪುಸ್ತಕಕ್ಕೂ ದಕ್ಕಿದೆ. ಪತ್ರಕರ್ತನ ವಸ್ತುನಿಷ್ಠತೆ, ಕಥೆಗಾರನ ಕಾಣ್ಕೆ - ಎರಡೂ ಸೇರಿ ಅಪರೂಪದ ಹದದಲ್ಲಿ ರೂಪುಗೊಂಡ ಕೃತಿಯಿದು. ಜನಪ್ರಿಯ ಸಿನಿಮಾಗಳು, ಒಮ್ಮುಖ ಉದ್ದೇಶದಿಂದ ಹುಟ್ಟಿಕೊಂಡ ಪುಸ್ತಕಗಳು, 'ನ್ಯೂಸ್]'ಗಳಿಂದ ನಮ್ಮ ಮನಸಲ್ಲಿ ರೂಪುಗೊಂಡ 'ನಕ್ಸಲ್]ವ್ಯಾಪಿ ನೆಲ'ದ ಕುರಿತಾದ ಕಪ್ಪು-ಬಿಳುಪು ಇಮೇಜ್]ಗಳನ್ನು ಒರೆಸಿಹಾಕುವ ಶಕ್ತಿ ಈ ಕಥನಕ್ಕಿದೆ. ಇಲ್ಲಿರುವುದು ಸತ್ತವರ ಸೊಲ್ಲಷ್ಟೇ ಅಲ್ಲ; ಇದು ಕುರುಡು ಸಾವಿನ ಕುಣಿತದ ಸದ್ದು. ಆ ಕುಣಿತದ ತುಳಿತಕ್ಕೆ ಸಿ
ThriftBooks sells millions of used books at the lowest everyday prices. We personally assess every book's quality and offer rare, out-of-print treasures. We deliver the joy of reading in recyclable packaging with free standard shipping on US orders over $15. ThriftBooks.com. Read more. Spend less.